ಚುನಾವಣಾ ಸಾಕ್ಷರತಾ ಕ್ಲಬ್. Electoral Literacy Clubs

ಚುನಾವಣಾ  ಸಾಕ್ಷರತಾ ಸಂಘ 

Electoral Literacy Clubs


ಚುನಾವಣಾ  ಸಾಕ್ಷರತಾ ಸಂಘದ (ELC) ಉದ್ದೇಶಗಳು

1.   ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು.

2.  ಭಾವೀ ಮತದಾರರಿಗೆ ಮತದಾನದಲ್ಲಿ ಭಾಗವಹಿಸುವ ಹಕ್ಕಿನ ಬಗ್ಗೆ ತಿಳಿಸುವುದು.

3.  ಮತದಾನ ಪದ್ಧತಿ ಹಾಗೂ ಮತದಾನ ಪ್ರಕ್ರಿಯೆಯನ್ನು ತಿಳಿಸುವುದು.

4.  ಮತದಾರರ ನೊಂದಣಿ ಬಗ್ಗೆ ಶಿಕ್ಷಣ ನೀಡುವುದು.

5.  .ವಿ.ಎಮ್ ಮತ್ತು ವಿ.ವಿ.ಪ್ಯಾಟ್ ಗಳನ್ನು ಪರಿಚಯಿಸುವುದು.

6.  ಮತದಾನ ಪ್ರಕ್ರಿಯೆಯಲ್ಲಿ ಬಳಸಲಾಗುವ .ವಿ.ಎಮ್ , ವಿ.ವಿ.ಪ್ಯಾಟ್ ಯಂತ್ರಗಳ ಬಳಕೆ, ಗುಣಮಟ್ಟ ಮತ್ತು ಅವುಗಳ ನೈಜತೆಯ ಕುರಿತು  ಶಿಕ್ಷಣ ನೀಡುವುದು.

7.  ಚುನಾವಣೆ ಎಂದರೇನು? ಹೇಗೆ? ಯಾವಾಗ? ಎಂಬುದರ ಬಗ್ಗೆ 14 ವರ್ಷ ಇರುವಾಗಲೇ ಮಾಹಿತಿ ನೀಡುವುದು.

8.  ಮತದಾನದ ಮಹತ್ವ ಮತ್ತು ತಿಳುವಳಿಕೆ ಹಾಗೂ ಅದರ ಬಗ್ಗೆ ನೈತಿಕತೆ ಹಾಗೂ ಗುಪ್ತ ಮತದಾನದ ಬಗ್ಗೆ ಮಾಹಿತಿ ನೀಡುವುದು.

9.  ಚುನಾವಣಾ ಆಯೋಗದ ಪಾತ್ರ ಹಾಗೂ ಸಮೂಹ ಮಾಧ್ಯಮಗಳ ಬಗ್ಗೆ ಮಾಹಿತಿ ನೀಡುವುದು.

10. ಮತದಾರರ ನೋಂದಣಿ ಮಾಡುವಂತೆ 18 ವರ್ಷ ತುಂಬಿದವರಿಗೆ ಪ್ರೋತ್ಸಾಯಿಸುವುದು.

11. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸುವುದು.

12. ಚುನಾವಣಾ ಅಕ್ರಮಗಳು ಮತ್ತು ಸಮೂಹ ಮಾಧ್ಯಮಗಳ ಪಾತ್ರವನ್ನು ಪರಿಚಯಿಸುವುದು.

13. ಸಂವಿಧಾನದಲ್ಲಿರುವ ಚುನಾವಣಾ ಪ್ರಕ್ರಿಯೆ, ಪ್ರಜಾಪ್ರಭುತ್ವ, ಮತದಾರರ ಭಾಗವಹಿಸುವಿಕೆ ಮುಂತಾದ ವಿಷಯಗಳ ಶಿಕ್ಷಣ ನೀಡುವುದು.


ಚುನಾವಣಾ ಸಾಕ್ಷರತಾ ಕ್ಲಬ್ ರಚನೆ

   ಶಾಲೆಯ ಮುಖ್ಯ ಶಿಕ್ಷಕರು ಚುನಾವಣಾ ಸಾಕ್ಷರತಾ ಸಂಘದ ಗೌರವಾಧ್ಯಕ್ಷರಾಗಿರುತ್ತಾರೆ. ಸಮಾಜ ವಿಜ್ಞಾಣ ಶಿಕ್ಷಕರು ಅಥವಾ ತರಬೇತಿ ಪಡೆದ ಶಿಕ್ಷಕರು ಸಂಘದ ನೋಡಲ್‌ ಶಿಕ್ಷಕರಾಗಿರುತ್ತಾರೆ. ವಿದ್ಯಾರ್ಥಿಗಳಿಂದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ 9 & 10ನೇ ತರಗತಿಗಳಿಂದ ಎರಡೆರಡು ವಿದ್ಯಾರ್ಥಿಗಳು ತರಗತಿ ಪ್ರತಿನಿಧಿಗಳಾಗಿರುತ್ತಾರೆ. 9 & 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಚುನಾವಣಾ ಸಾಕ್ಷರತಾ ಸಂಘದ ಸದಸ್ಯರಾಗಿರುತ್ತಾರೆ. ಸಂಘದ ಮಾದರಿ ಈ ಕೆಳಗಿನಂತಿದೆ.


ಮು.ಶಿ.

ಗೌರವಾಧ್ಯಕ್ಷರು

.ಶಿ.

ನೋಡಲ್ ಶಿಕ್ಷಕರು


ಕ್ರ..ಸಂ

ಹೆಸರು

ಹುದ್ದೆ

ತರಗತಿ

1

 

ಅಧ್ಯಕ್ಷ

10

2

 

ಕಾರ್ಯದರ್ಶಿ

09

3

 

10 ನೇ ತರಗತಿ ಪ್ರತಿನಿಧಿ

10

4

 

10 ನೇ ತರಗತಿ ಪ್ರತಿನಿಧಿ

10

5

 

9 ನೇ ತರಗತಿ ಪ್ರತಿನಿಧಿ

09

6

 

9 ನೇ ತರಗತಿ ಪ್ರತಿನಿಧಿ

09

7

9ನೇ ಹಾಗೂ 10 ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು

ಸದಸ್ಯರು

9 & 10


E L C SLOGANS

  1. ಮತದಾನ, ನಿಮ್ಮ ಹಕ್ಕು
  2. ತಪ್ಪದೇ ಮತದಾನ ಮಾಡಿ
  3. ನಿಮ್ಮ ಮತವನ್ನು ಮಾರದಿರಿ
  4. ನಿಮ್ಮ ಮತ ನಾಡಿಗೆ ಹಿತ
  5. ನಿಮ್ಮ ಮತ, ನಿಮ್ಮ ಹಕ್ಕು
  6. ಮತದಾನ, ನಮ್ಮ ಕರ್ತವ್ಯ
  7. ಯೋಚಿಸಿ ಮತದಾನ ಮಾಡಿ
  8. ಮತ ಹಾಕುವುದು ನಮ್ಮ ಅಧಿಕಾರ, ಯಾರೂ ಮಾಡುವುದು ಬೇಡ ತಾತ್ಸಾರ
  9. ನಿಮ್ಮ ಮತ ಅಮೂಲ್ಯವಾದುದು, ಅದನ್ನು ಮಾರಿಕೊಳ್ಳಬೇಡಿ

(ನಿಮಗೆ ತಿಳಿದಿರುವ ಹೆಚ್ಚಿನ ಸ್ಲೋಗನ್‌ಗಳನ್ನು ಕಮೆಂಟ್‌ ಮಾಡಿ ತಿಳಿಸಿ, ಇಲ್ಲಿ ಸೇರಿಸಲಾಗುವುದು)

ಚುನಾವಣಾ ಸಾಕ್ಷರತಾ ಕ್ಲಬ್ ಕ್ರಿಯಾಯೋಜನೆ

ಕ್ರ.ಸಂ

ತಿಂಗಳು

ಚಟುವಟಿಕೆ / ಕಾರ್ಯಕ್ರಮ

ನೋಡಲ್ ಶಿಕ್ಷಕರ ಸಹಿ

ಮು.ಶಿ

ಸಹಿ

1

ಜೂನ್

ಚುನಾವಣಾ ಸಾಕ್ಷರತಾ ಕ್ಲಬ್ ಗಳ ರಚನೆ-ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ

 

 

2

ಜುಲೈ

ಮತದಾನ ಪ್ರಕ್ರಿಯೆ ಮೂಲಕ ಶಾಲಾ ಸಂಸತ್ತು ರಚನೆ

 

 

3

ಆಗಸ್ಟ್

ರಸಪ್ರಶ್ನೆ ಕಾರ್ಯಕ್ರಮ

 

 

4

ಸೆಪ್ಟಂಬರ್

ಇಎಲ್ಸಿ ಡ್ರಾಯಿಂಗ್ ಸ್ಪರ್ಧೆಗಳು

 

 

5

ಅಕ್ಟೋಬರ್

ದಸರಾ ರಜೆ ಮತ್ತು SA 1 ಪರೀಕ್ಷೆಗಳು

---

---

6

ನವೆಂಬರ್

ಸಂವಿಧಾನ ದಿನಾಚರಣೆ

ಪ್ರಬಂಧ ಸ್ಪರ್ದೆ

 

 

7

ಡಿಸೆಂಬರ್

EVM, VVPAT ಪರಿಚಯ ಹಾಗೂ ಬಳಕೆಯ ಬಗ್ಗೆ ವಿಡಿಯೋ ಪ್ರದರ್ಶನ

 

 

8

ಜನವರಿ

ಮತದಾರರ ದಿನಾಚರಣೆ-ಜನವರಿ 25

ಪ್ರಬಂಧ, ಭಾಷಣ, ಚರ್ಚಾಸ್ಪರ್ಧೆಗಳು

 

 

9

ಫೆಬ್ರವರಿ

ಕಾರ್ಡ್ ಗೇಮ್ ಹಾಗೂ ವಿವಿಧ ಇಎಲ್ಸಿ ಆಟಗಳು

 

 


Download Files below

ಕ್ರಿಯಾಯೋಜನೆ

Download Pdf

Download doc

E L C SLOGANS

Download Pdf

Download doc

ಸಂಘದ ರಚನೆ

Download Pdf

Download doc


SSLC Social Science revision Videos

10ನೇ ತರಗತಿಯ ಅತ್ಯಂತ ಬಹುನಿರೀಕ್ಷಿತ ಅಧ್ಯಾಯಗಳಿಂದ ಬಹುನಿರೀಕ್ಷಿತ 3 ಮತ್ತು ನಾಲ್ಕು ಅಂಕದ ಪ್ರಶ್ನೋತ್ತರಗಳು. ವಿದ್ಯಾಗಮ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬಹುದು.